

ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ರವರು ಶಾಲೆಗೆ ಸೇರಿದ ದಿನವನ್ನು ಇಂದು ದೇಶಾದ್ಯಂತ "ವಿದ್ಯಾರ್ಥಿ ದಿವಸ್" ದಿನವನ್ನಾಗಿ ಆಚರಿಸಲಾಗುತ್ತಿದೆ. ಇಂದು ನಮ್ಮ ಬ್ಯಾಲಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಬುದ್ಧ ಜನ ಸೇವಾ ಟ್ರಸ್ಟ್ (ರಿ) ಮತ್ತು ಭೀಮ ಪಡೆ ವತಿಯಿಂದ "ವಿದ್ಯಾರ್ಥಿ ದಿವಸ್" ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಮಕ್ಕಳಿಗೆ ಅಂಬೇಡ್ಕರ್ ಅವರ ಬಾಲ್ಯದ ಜೀವನದ ಬಗ್ಗೆ ತಿಳಿಸಲಾಯಿತು. ಅಂಬೇಡ್ಕರ್ ಜೀವನ ಚರಿತ್ರೆಯ ಪುಸ್ತಕ ಹಾಗೂ ಲೇಖನಿ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಡಿ.ಶಿವಶಂಕರ್ ಮಕ್ಕಳನ್ನು ಕುರಿತು ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಬೆಳ್ಳಿಯಪ್ಪ, ಖಜಾಂಚಿ ಶ್ರೀ ನರಸಿಂಹಮೂರ್ತಿ, ಮುಖ್ಯಶಿಕ್ಷಕರಾದ ಶ್ರೀ ವೆಂಕಟೇಶ್, ಸಹಶಿಕ್ಷಕರುಗಳು, ಇಂಜಿನಿಯರ್ ಶ್ರೀ ಬಿ.ವಿ ಹೇಮರಾಜು, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ವೆಂಕಟೇಶ್ ಬಿ.ಹೆಚ್, ನಿರ್ದೇಶಕರುಗಳಾದ ಬ್ಯಾಲಕೆರೆ ಚಿಕ್ಕರಾಜು, ಬೀಚನಹಳ್ಳಿ ಸುರೇಶ್, ಅಜ್ಜಹಳ್ಳಿ ನವೀನ್ ಕುಮಾರ್, ಭೀಮಪಡೆಯ ಮಾಚೋಹಳ್ಳಿ ನಾಗರಾಜು, ಬ್ಯಾಲಕೆರೆ ಚಿಕ್ಕವೆಂಕಟಯ್ಯ, ನವೀನ್, ದಯಾನಂದ, ಮಂಜುನಾಥ್, ವರುಣ್, ದೇವರಾಜು ಉಪಸ್ಥಿತರಿದ್ದರು